Home
| ಕನಕಪುರ ಪುರಸಭೆಯ ಕಿರುಪರಿಚಯ: ಕನಕಪುರ ತಾಲ್ಲೂಕು ಬೆಂಗಳೂರಿನಿಂದ 56 ಕಿಲೋ. ಮೀ. ದೂರದಲ್ಲಿದ್ದು, ಅರ್ಕಾವತಿ ನದಿ ದಂಡೆಯಲ್ಲಿರುತ್ತದೆ. ತಾಲ್ಲೂಕಿನ ಒಟ್ಟು ವಿಸ್ತೀರ್ಣ 159426ಗಳಾಗಿದ್ದು 6 ಹೋಬಳಿಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ 1. ಕಸಬಾ 2. ಹಾರೋಹಳ್ಳಿ 3. ಮರಳವಾಡಿ 4. ಸಾತನೂರು 5. ಉಯ್ಯಂಬಳ್ಳಿ 6. ಕೋಡಿಹಳ್ಳಿ, 43 ಗ್ರಾಮಪಂಚಾಯಿತಿಗಳನ್ನು ಹಾಗೂ 30 ಚುನಾಯಿತ ಸದಸ್ಯರನ್ನು ಒಳಗೊಂಡ ತಾಲ್ಲೂಕು ಪಂಚಾಯಿತಿ ಅಸ್ತಿತ್ವದಲ್ಲಿರುತ್ತದೆ.2001ರ ಜನಗಣತಿ ಪ್ರಕಾರ ಕನಕಪುರವು 47,060 ಜನಸಂಖ್ಯೆಯನ್ನು ಹೊಂದಿದ್ದು, 27 ವಾರ್ಡುಗಳು ಹಾಗೂ ಪ್ರತಿ ವಾರ್ಡಿಗೆ ಒಬ್ಬರಂತೆ 27 ಚುನಾಯಿತ ಸದಸ್ಯರುಗಳು ಹಾಗೂ 5 ನಾಮ ನಿರ್ದೇಶನ ಸದಸ್ಯರುಗಳನ್ನು ಒಳಗೊಂಡಿದೆ.ಗಣಿಗಾರಿಕೆ ,ರೇಷ್ಮೆ ಇಲ್ಲಿನ ಮುಖ್ಯ ಉದ್ಯಮವಾಗಿರುತ್ತದೆ. ಮುತ್ತತ್ತಿ, ಸಂಗಮ, ಮೇಕೆದಾಟು, ಬಿಳಿಕಲ್ಲು ಬೆಟ್ಟ, ಕಬ್ಬಳು, ಚುಂಚಿಫಾಲ್ಸ್ ಹಾಗೂ ಟೌನ ಸಮೀಪದ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧವಾದ ಶ್ರೀ ವೆಂಕಟರಮಣಸ್ವಾಮಿ ದೇವಾಲಯವನ್ನು ಹೊಂದಿದೆ. ಇವುಗಳು ಕನಕಪುರ ತಾಲ್ಲೂಕಿನ ಮುಖ್ಯ ಪ್ರವಾಸಿತಾಣಗಳಾಗಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. |
| A Brief Note On Kanakapura TMC: Kanakapura situated to the (56 km from Bangalore ) South of Bangalore is on the right bank of the river Arkavati. The taluk has geographical area of 1,59,426 Hectares consisting of 6 hobli’s viz., a) Kasaba b) Harohalli c) Maralawadi d) Kodihalli e) Sathanur f) Uyyamballi.There are 43 Grama Panchayaths in the taluk. As per 2001 Census the Kanakapura Town population is 47060.Kanakapura Town Consists of 27 Wards and 27 Elected Couniclors and 5 Nominee Councilors. The main potentiality of this taluk is Granite quaries, Agriculture is the main source of income for people. The main tourist attraction of this place is Sangama, Mekedatu, Muthatthi,Bilikallu Betta, Kabbalu, Chunchifalls & Shri Venkataramanaswamy Temple which is famoused in the name of Chikka thirupathi. |
|
ಗಣಕೀಕರಣ : ಕನಕಪುರ ಪುರಸಭಾ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. 1990 ನೇ ಸಾಲಿನಿಂದ ಈವರೆಗಿನ ಎಲ್ಲಾ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. |
|
Computerisation : Properties within Kanakapura TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1990. Citizens can make use of this facility to register & obtain Birth & Death Certificates. |
| "ಸಾರ್ವಜನಿಕರ ಮಾಹಿತಿಗಾಗಿ" "ಎಂಪ್ಲಾಯ್ ಮೆಂಟ್ ಆಫ್ ಮ್ಯಾನುಯಲ್ ಸ್ಕಾವೆಂಜಿಂಗ್ ಅಂಡ್ ಕನ್ಸ್ಟ್ರಕ್ಷನ್ ಆಫ್ ಡ್ರೈಲೆಟ್ರಿನ್(ಪ್ರಾಹಿಬಿಷನ್) ಆಕ್ಟ್ 1993" ನ್ನು ಜಾರಿಗೆ ತಂದಿರುತ್ತಾರೆ. ಸದರಿ ಆಕ್ಟ್ ನ ಕಲಂಗಳಲ್ಲಿನ ಅಂಶಗಳ ಪ್ರಕಾರ ಒಣ ಶೌಚಾಲಯಗಳನ್ನು ನಿರ್ಮಾಣ ಮಾಡುವುದು ಮತ್ತು ಸ್ಕ್ಯಾವೆಂಜರ್ಸ ಮೂಲಕ ಶೌಚವನ್ನು ತೆಗೆಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ತಮ್ಮ ಮನೆಯ ಶೌಚಾಲಯದ ಗುಂಡಿಗಳು ತುಂಬಿದ್ದು ತೆರವುಗೊಳಿಸುವ(ಸ್ವಚ್ಛಗೊಳಿಸುವ) ಕಾರ್ಯವನ್ನು ಪುರಸಭೆಗೆ ಮಾಹಿತಿ ನೀಡಿದ್ದಲ್ಲಿ " ಸಕ್ಕಿಂಗ & ಜೆಟ್ಟಿಂಗ್ ಮೆಷೀನ್" ಮೂಲಕ ತೆರವುಗೊಳಿಸಲಾಗುತ್ತದೆ. |
"This page is maintained by: Shri K Mayanna Gowda, Chief Officer - 9448045397" Last Updated by:03.02.2012"

